ಶಿರ್ವ:-  "ಕ್ರಿಸ್ತನ ಹುಟ್ಟೇ ನಮಗೆ ಜೀವನದ ಸಂದೇಶವನ್ನು ನೀಡುತ್ತದೆ. ಎಲ್ಲ ಮತಧರ್ಮ ಸಂಸ್ಥಾಪಕರ ಮೂಲ ಉದ್ದೇಶವೇ ಮನುಕುಲದ ಉದ್ಧಾರ. ಅದನ್ನು ಅರಿತು ಬಾಳಿದಾಗ ಮಾತ್ರ ಜೀವನದಲ್ಲಿ ಸಾಕ್ಷಾತ್ಕಾರ. ಮಾನವನ ಜೀವನ ವ್ಯವಹಾರ ಅಲ್ಲ. ಕ್ರಿಸ್ಮಸ್ ಉದಾರತೆ, ಔದಾರ್ಯತೆ, ಮಾನವತೆಯ ಪ್ರತೀಕ" ಎಂದು ಸಾಸ್ತಾನದ ಹಿರಿಯ ಚಿಂತಕ ಇಬ್ರಾಹಿಮ್ ಸಾಹೇಬ್ ನುಡಿದರು.

ಅವರು ಗುರುವಾರ ಬಂಟಕಲ್ಲು ಸಮೀಪದ ಪಾಂಬೂರು ಶಾಂತಿಪುರ ಇಗರ್ಜಿಯಲ್ಲಿ ಕ್ರಿಸ್ಮಸ್ ಪ್ರಯುಕ್ತ ಏರ್ಪಡಿಸಿದ “ಸ್ನೇಹ ಸೌಹಾರ್ದ ಸಮ್ಮಿಲನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಂಟಕಲ್ಲು ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಎನ್. ರಾಧಾಕೃಷ್ಣ ಪ್ರಭು ಮಾತನಾಡಿ, "ಜಗತ್ತಿನಲ್ಲಿ ಹಲವು ಮತಧರ್ಮಗಳನ್ನು ಪ್ರೀತಿ, ಸ್ನೇಹ ಸೌಹಾರ್ದತೆಗಳಿಂದ ಮುಕ್ತವಾಗವಾಗಿ ಆಚರಿಸುವ ಏಕೈಕ ರಾಷ್ಠ್ರ ಭಾರತ. ಶಾಂತಿ, ಪ್ರೇಮ ಹೊರಗಿಲ್ಲ, ನಮ್ಮೊಳಗೇ ಇದೆ. ಧರ್ಮ ಎಂದರೆ ಜೀವನ ಪದ್ಧತಿ" ಎಂದರು.

ಹಿರಿಯ ಸಾಹಿತಿ, ಕವಿ. ಕ್ಯಾಥರಿನ್ ರೊಡ್ರಿಗಸ್ ಮಾತನಾಡಿ "ನಿರಪರಾಧಿಗಳನ್ನು ಗೋಲಾಡಿಸುವುದು ಧರ್ಮವಲ್ಲ. ನಮ್ಮ ಹೃದಯದ ಗೋದಲಿ ಹೇಗಿದೆ ಎಂದು ಪ್ರಶ್ನಿಸುವ ಅಗತ್ಯವಿದೆ" ಎಂದರು. ಈ ಸಂದರ್ಭದಲ್ಲಿ ಚರ್ಚ್‍ವತಿಯಿಂದ ಪರಿಸರದ ಐವತ್ತಕ್ಕೂ ಅಧಿಕ ವಿವಿಧ ಮತಧರ್ಮಗಳ ಸಾಧಕರನ್ನು ಗೌರವಿಸುವ ಮೂಲಕ ಕ್ರಿಸ್ಮಸ್ ಸೌಹರ್ದತೆಯನ್ನು ಸಾಕ್ಷೀಕರಿಸಿದ ಧರ್ಮಗುರು ರೆ.ಫಾ.ಪಾವ್ಲ್ ರೇಗೋ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿಶ್ವಮಾನವರಾಗಿ, ಮನುಕುಲವನ್ನು ಗೌರವಿಸಿ, ಪ್ರತೀಯೊಂದು ಧರ್ಮದ ಸತ್ವವನ್ನು ಅರಿತು ಬಾಳುವುದೇ ಕ್ರಿಸ್ಮಸ್ ಸಂದೇಶ ಎಂದರು. ಪಾಲನಾ ಸಮಿತಿ ಅಧ್ಯಕ್ಷ ಪ್ರಕಾಶ ನೊರೋನ್ನಾ ಸ್ವಾಗತಿಸಿದರು. ಉಪನ್ಯಾಸಕ ವಿನ್ಸೆಂಟ್ ಆಳ್ವ ಸಾಧಕರನ್ನು ಪರಿಚಯಿಸಿದರು. ಅನಿತಾ ಮತಾಯಸ್, ಜ್ಯೋತಿ ಲಾರೆನ್ಸ್ ಆಲ್ವ ನಿರೂಪಿಸಿದರು. ಕಾರ್ಯದರ್ಶಿ ಅಸುಂತಾ ಡಿಸೋಜ ವಂದಿಸಿದರು. ಸಮಾರಂಭದಲ್ಲಿ ಜನಪ್ರತಿನಿಧಿಗಳು, ಉದ್ಯಮಿಗಳು, ವಿವಿಧ ಸಾಮಾಜಿಕ ಸೇವಾ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು. (ಫೋಟೊ-26 ಪಾಂಬೂರು)

Pic & Report by - Anil Studio Pamboor.

 

 

 

 

 

 

 

 

 

 

 

 

 

 

 

 

 

 

 

 

 

More Photos...

 

CHURCH OF H0LY CROSS
Pamboor, Shanthipura
Bantakal P.O. – 574 115
Udupi District

Copyright © 2013 - www.pamboorchurch.com. Powered by eCreators